ಟಾಪ್ 10 ಕಂಪನಿಗಳ ಪೈಕಿ 6 ಕಂಪನಿಗಳಿಗೆ 2 ಟ್ರಿಲಿಯನ್ ನಷ್ಟ!

Spread the love


ಯಾವ ಕಂಪನಿಗಳಿಗೆ ನಷ್ಟ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಅತಿ ದೊಡ್ಡ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್ ಹಾಗೂ ಎಚ್ ಡಿ ಎಫ್ ಸಿ ನಷ್ಟ ಅನುಭವಿಸಿವೆ. ಅದಾನಿ ಸಂಸ್ಥೆ ಟಾಪ್ 10ರಲ್ಲಿ ಉಳಿದುಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 46,852.27 ಕೋಟಿ ರು ಕುಸಿತ ಕಂಡು 16,90,865.41 ಕೋಟಿ ರು ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 76,346.11 ಕೋಟಿ ರು ಇಳಿಕೆ ಕಂಡು 11,00,880.49 ಕೋಟಿ ರು ಮೌಲ್ಯಕ್ಕೆ ತಲುಪಿದೆ. ಇನ್ಫೋಸಿಸ್ ಸಂಸ್ಥೆ 55,831.53 ಕೋಟಿ ರು ಇಳಿಕೆ ಕಂಡು 5,80,312.32 ಕೋಟಿ ರು ಮೌಲ್ಯಕ್ಕೇರಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಚ್ ಡಿ ಎಫ್ ಸಿ ಬ್ಯಾಂಕ್ 2,614.72 ರು ಇಳಿಕೆ ಕಂಡು 8,31,239.46 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಮೌಲ್ಯ 4,620.81 ಕೋಟಿ ರು ಕುಗ್ಗಿ 4,36,880.78 ಕೋಟಿ ರು ಆಗಿದೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 7,273.55 ಕೋಟಿ ರು ವ್ಯತ್ಯಾಸ ಕಂಡು 5,01,206.19 ಕೋಟಿ ರು ತಲುಪಿದೆ.

ಅದಾನಿ ಕಂಪನಿ

ಅದಾನಿ ಕಂಪನಿ

ಕಳೆದ ಮಂಗಳವಾರ ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಉಳಿದುಕೊಂಡಿದೆ. ಕಳೆದ ವಾರ ಅದಾನಿ ಕಂಪನಿ 17,719.6 ಕೋಟಿ ರು ಹೆಚ್ಚಳ ಕಂಡು 4,56,292.28 ಕೋಟಿ ರು ತಲುಪಿದೆ.

ಬಜಾಜ್ ಫೈನಾನ್ಸ್ ಸಂಸ್ಥೆ

ಬಜಾಜ್ ಫೈನಾನ್ಸ್ ಸಂಸ್ಥೆ

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 14,015.31 ಕೋಟಿ ರು ಇಳಿಕೆ ಕಂಡು 5,94,058.91 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆ 6,435.71 ಕೋಟಿ ರು ಏರಿಕೆ ಕಂಡು 4,41,348.83 ಕೋಟಿ ರು ಮುಟ್ಟಿದೆ. ಐಸಿಐಸಿಐ ಬ್ಯಾಂಕ್ 5,286.92 ಕೋಟಿ ರು ಹೆಚ್ಚಳ ಕಂಡು 6,33,110.48 ಕೋಟಿ ರು ತಲುಪಿದೆ

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್,ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅದಾನಿ ಟ್ರಾನ್ಸ್ ಮಿಷನ್, ಬಜಾಜ್ ಫೈನಾನ್ಸ್. ಹಾಗೂ ಎಚ್ ಡಿ ಎಫ್ ಸಿSource link

%d bloggers like this: