ಆಸ್ಕರ್‌ಗೆ ಅಧಿಕೃತ ಆಯ್ಕೆಯಾಗಲಿಲ್ಲ ‘RRR’: ರೇಸ್‌ನಲ್ಲಿದ್ದ ಇತರೆ ಸಿನಿಮಾ ಯಾವುದು?

Spread the love


ತಮಿಳಿನ
ಎರಡು
ಸಿನಿಮಾಗಳು

ತಮಿಳಿನ
‘ಇರವಿನ್
ನಿಳಲ್’
ಸಿನಿಮಾ
ಆಸ್ಕರ್‌
ರೇಸ್‌ನಲ್ಲಿತ್ತು.
ಇದೇ
ವರ್ಷ
ಬಿಡುಗಡೆ
ಆಗಿರುವ

ಸಿನಿಮಾ
ತುಸು
ಭಿನ್ನ
ಕತೆಯನ್ನು
ಹೊಂದಿದೆ.
ಆರ್
ಪಾರ್ತಿಭನ್
ನಟಿಸಿ
ನಿರ್ದೇಶಿಸಿರುವ

ಸಿನಿಮಾ
ತುಸು
ವಿವಾದಕ್ಕೂ
ಸಹ
ಕಾರಣವಾಗಿತ್ತು.
ಸಿನಿಮಾಕ್ಕೆ
ಎ.ಆರ್.ರೆಹಮಾನ್
ಸಂಗೀತ
ನೀಡಿದ್ದಾರೆ.

ಸಿನಿಮಾ
ಜ್ಯೂರಿಗಳನ್ನು
ಇಂಪ್ರೆಸ್
ಮಾಡಲು
ವಿಫಲವಾಗಿದೆ.
ಕಳೆದ
ಬಾರಿ
ತಮಿಳಿನ
‘ಕೂಳಂಗಳ್’
ಸಿನಿಮಾ
ಆಸ್ಕರ್‌ಗೆ
ಅಧಿಕೃತವಾಗಿ
ಆಯ್ಕೆ
ಆಗಿತ್ತು.
ಆರ್.ಮಾಧವನ್
ನಟಿಸಿ
ನಿರ್ದೇಶಿಸಿದ್ದ
‘ರಾಕೆಟ್ರಿ:
ದಿ
ನಂಬಿ
ಎಫೆಕ್ಟ್’
ಸಹ
ಆಸ್ಕರ್‌
ರೇಸ್‌ನಲ್ಲಿತ್ತು
ಆದರೆ
ಆಯ್ಕೆ
ಆಗಿಲ್ಲ.

ಮಲಯಾಳಂನ 'ಆರಿಯಿಪ್ಪು'

ಮಲಯಾಳಂನ
‘ಆರಿಯಿಪ್ಪು’

ಮಲಯಾಳಂ
ಸಿನಿಮಾ
‘ಅರಿಯಿಪ್ಪು’
ಸಹ
ಆಸ್ಕರ್‌ಗೆ
ಆಯ್ಕೆ
ಆಗಲೆಂದು
ಸ್ಪರ್ಧೆಗೆ
ಕಳಿಸಲ್ಪಟ್ಟಿತ್ತು.
ರಾಷ್ಟ್ರಪ್ರಶಸ್ತಿ
ವಿಜೇತ
‘ಟೇಕ್
ಆಫ್’,
‘ಸಿ
ಯು
ಸೂನ್’,
‘ಮಲ್ಲಿಕ್’
ರೀತಿಯ
ಸೂಪರ್
ಹಿಟ್
ಸಿನಿಮಾಗಳನ್ನು
ನೀಡಿರುವ
ಮಹೇಶ್
ನಾರಾಯಣ್
ನಿರ್ದೇಶಿಸಿರುವ

ಸಿನಿಮಾದಲ್ಲಿ
ಕೊಂಚೊಕೊ
ಬೋಬನ್
ಮುಖ್ಯ
ಪಾತ್ರದಲ್ಲಿ
ನಟಿಸಿದ್ದರು.
ಗಂಡ-ಹೆಂಡತಿ
ಕೆಲಸ
ಮಾಡುವ
ಕಾರ್ಖಾನೆಯಲ್ಲಿ
ಒಂದು
ವಿಡಿಯೋ
ಹರಿದಾಡಲು
ಆರಂಭವಾಗುತ್ತದೆ.
ಅದು
ಅವರ
ಜೀವನವನ್ನು
ಹೇಗೆ
ಬದಲಾಯಿಸುತ್ತದೆ
ಎಂಬ
ಕತೆಯನ್ನು

ಸಿನಿಮಾ
ಹೊಂದಿದೆ.

ತೆಲುಗಿನ ಎರಡು ಸಿನಿಮಾಗಳು

ತೆಲುಗಿನ
ಎರಡು
ಸಿನಿಮಾಗಳು

ತೆಲುಗಿನ
‘RRR’
ಸಿನಿಮಾ

ಬಾರಿ
ಆಸ್ಕರ್‌ಗೆ
ಅಧಿಕೃತವಾಗಿ
ಆಯ್ಕೆ
ಆಗಲಿದೆ
ಎಂದು
ಬಹುತೇಕ
ಸಿನಿ
ಪ್ರೇಮಿಗಳು
ಬಲವಾಗಿ
ನಂಬಿದ್ದರು.
ಆಯ್ಕೆ
ಆಗಲಿ
ಎಂದು
ಆಶಿಸಿದ್ದರು.
ಅಂತೆಯೇ
‘RRR’
ಸಿನಿಮಾ
ಸಹ
ಆಯ್ಕೆ
ಸಮಿತಿಗೆ
ತಮ್ಮ
ಸಿನಿಮಾ
ಕಳಿಸಿತ್ತು
ಆದರೆ
ಜ್ಯೂರಿಗಳು
‘RRR’
ಅನ್ನು
ಆಯ್ಕೆ
ಮಾಡಿಲ್ಲ.
ಅಂದಹಾಗೆ
‘RRR’
ಮಾತ್ರವಲ್ಲ
ತೆಲುಗಿನ
ಮತ್ತೊಂದು
ಸಿನಿಮಾ
ಜ್ಯೂರಿಗಳ
ಮುಂದಿತ್ತು
ಅದುವೇ
‘ಸ್ಥಳಂ’.
ಜಾಗದ
ಕುರಿತಾಗಿ
ನಡೆಸುವ
ಹೋರಾಟದ
ಕತೆಯನ್ನು

ಸಿನಿಮಾ
ಒಳಗೊಂಡಿದೆ.

ಹಿಂದಿಯ ಐದು ಸಿನಿಮಾಗಳು

ಹಿಂದಿಯ
ಐದು
ಸಿನಿಮಾಗಳು

ಹಿಂದಿ
ಭಾಷೆಯ
ಐದು
ಸಿನಿಮಾಗಳು
ಆಸ್ಕರ್‌ಗೆ
ಆಯ್ಕೆ
ಆಗುವ
ಕನಸಿನಿಂದ
ಜ್ಯೂರಿಗಳಿಗೆ
ಕಳಿಸಲಾಗಿತ್ತು.
ಕೆಲವು
ಕಳಪೆ
ಸಿನಿಮಾಗಳನ್ನೂ
ಕಳಿಸಲಾಗಿತ್ತು.
ಕಾಶ್ಮೀರಿ
ಪಂಡಿತರ
ಮೇಲೆ
ನಡೆದ
ಹಿಂಸೆಯ
ಚಿತ್ರಣದ
ಕತೆ
ಹೊಂದಿದ್ದ
‘ದಿ
ಕಾಶ್ಮೀರ್
ಫೈಲ್ಸ್’.
ಇಳಿವಯಸ್ಸಿನಲ್ಲಿ
ತಂದೆ-ತಾಯಿ
ಆಗುವ
ಪೋಷಕರ
ಕತೆ
ಹೊಂದಿರುವ
ಹಾಸ್ಯಪ್ರಧಾನ
ಸಿನಿಮಾ
‘ಬದಾಯಿ
ಹೊ’,
ನಾಗರಾಜ್
ಮಂಜುಳೆ
ನಿರ್ದೇಶನದ
ನಿಜ
ಘಟನೆ
ಆಧರಿಸಿದ
ಸಿನಿಮಾ
‘ಝುಂಡ್’,
ಇತ್ತೀಚೆಗಷ್ಟೆ
ಬಿಡುಗಡೆ
ಆದ
ರಣ್ಬೀರ್
ಕಪೂರ್-ಆಲಿಯಾ
ಭಟ್
ನಟನೆಯ
‘ಬ್ರಹ್ಮಾಸ್ತ್ರ’
ಸಿನಿಮಾಗಳು
ಆಯ್ಕೆ
ಸಮಿತಿ
ಮುಂದಿದ್ದವು
ಆದರೆ
ಯಾವ
ಸಿನಿಮಾಗಳೂ
ಸಹ
ಆಯ್ಕೆ
ಆಗಿಲ್ಲ.

ಬೆಂಗಾಲಿ, ದಿಮಾಸ ಹಾಗೂ ಗುಜರಾತಿ ಸಿನಿಮಾ

ಬೆಂಗಾಲಿ,
ದಿಮಾಸ
ಹಾಗೂ
ಗುಜರಾತಿ
ಸಿನಿಮಾ

ಬೆಂಗಾಳಿ
ಸಿನಿಮಾ
‘ಅಪಾರಜಿತೊ’
ಆಸ್ಕರ್‌
ರೇಸ್‌ನಲ್ಲಿತ್ತು
ಆದರೆ
ಆಯ್ಕೆ
ಆಗಲಿಲ್ಲ.
ದಿಮಾಸ
ಭಾಷೆಯ
‘ಸೆಮ್‌ಕೋರ್’
ಸಿನಿಮಾ
ಸಹ
ಆಸ್ಕರ್‌ಗೆ
ಅಧಿಕೃತ
ಆಯ್ಕೆ
ಬಯಸಿತ್ತು.
ಗುಜರಾತಿ
ಸಿನಿಮಾ
‘ಚೆಲ್ಲೊ
ಶೋ’
ಸಿನಿಮಾ
ಸಹ
ರೇಸ್‌ನಲ್ಲಿತ್ತು
ಮತ್ತು
ಆಸ್ಕರ್‌ಗೆ
ಭಾರತದ
ಅಧಿಕೃತ
ಆಯ್ಕೆಯ
ಶ್ರೇಯ
ಪಡೆದುಕೊಂಡಿತು.
ಪಾನ್
ನಳಿನ್

ಸಿನಿಮಾವನ್ನು
ನಿರ್ದೇಶನ
ಮಾಡಿದ್ದಾರೆ.Source link

%d bloggers like this: