Guru Shishyaru Twitter Review : ಗುರು ಶಿಷ್ಯರು ಹಿಟ್ಟಾ ಫ್ಲಾಪಾ? ಫಸ್ಟ್ ಶೋ ನೋಡಿದವರು ಹೇಳಿದ್ದಿಷ್ಟು

Spread the love


ಇದು ಪ್ಯಾನ್ ಇಂಡಿಯಾಗೂ ಕಡಿಮೆ ಇಲ್ಲ

ಗುರು ಶಿಷ್ಯರು ಚಿತ್ರ ವೀಕ್ಷಿಸಿದ ದರ್ಶನ್ ಅಭಿಮಾನಿಯೋರ್ವ ಟ್ವಿಟರ್ ಖಾತೆಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದು, ಚಿತ್ರ ಎಲ್ಲಾ ವಿಭಾಗಗಳಲ್ಲಿಯೂ ಸಖತ್ತಾಗಿದೆ ಹಾಗೂ ಇದು ಪ್ಯಾನ್ ಇಂಡಿಯಾ ಚಿತ್ರದ ಅಂಶಕ್ಕಿಂತ ಕಡಿಮೆ ಏನಿಲ್ಲ, ಚಿತ್ರತಂಡ ಮಾಸ್ಟರ್ ಪೀಸ್ ಒಂದನ್ನು ನೀಡಿದ್ದು, ಇದು ಯಶಸ್ಸಿಗೆ ಅರ್ಹವಾಗಿದೆ, ಎರಡನೇ ಯೋಚನೆ ಮಾಡದೇ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂದಿದ್ದಾರೆ.

ಒಂದು ಬಾರಿ ನೋಡಬಹುದು

ಒಂದು ಬಾರಿ ನೋಡಬಹುದು

ಮತ್ತೋರ್ವ ಸಿನಿ ಪ್ರೇಕ್ಷಕ ಗುರು ಶಿಷ್ಯರು ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದು, ಖೋ ಖೋ ಆಟವನ್ನು ಪ್ರೋತ್ಸಾಹಿಸಲು ಮಾಡಿರುವ ಗುರು ಶಿಷ್ಯರು ಒಂದೊಳ್ಳೆ ಪ್ರಯತ್ನ ಎಂದಿದ್ದಾರೆ. ಡೀಸೆಂಟ್ ಸ್ಟೋರಿ ಲೈನ್ ಹೊಂದಿರುವ ಚಿತ್ರವಾಗಿದ್ದು, ನೋಡಬಹುದಾದಂತ ಚಿತ್ರಕತೆಯಿದೆ, ವಿಎಫ್ಎಕ್ಸ್ ಇನ್ನೂ ಕೊಂಚ ಚೆನ್ನಾಗಿರಬಹುದಿತ್ತು, ಕತೆ ದ್ವಿತೀಯಾರ್ಧದಲ್ಲಿ ಪಿಕ್ ಅಪ್ ಆಗಲಿದ್ದು, ಊಹಿಸಬಹುದಾಗಿದೆ, ಆದರೆ ಅಂತಿಮ ಹಂತದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ, ಒಂದು ಬಾರಿ ಚಿತ್ರವನ್ನು ನೋಡಬಹುದು ಎಂದು ಬರೆದುಕೊಂಡಿದ್ದಾರೆ.

ಅವಾರ್ಡ್ ಗೆಲ್ಲುವಂತ ಸಿನಿಮಾ

ಅವಾರ್ಡ್ ಗೆಲ್ಲುವಂತ ಸಿನಿಮಾ

ಶಿವಪ್ರಸಾದ್ ಎಲ್ ಎಮ್ ಎನ್ನುವವರು ಚಿತ್ರದ ಕುರಿತು ಬರೆದುಕೊಂಡಿದ್ದು, ಗುರುಶಿಷ್ಯರು ಅದ್ಭುತವಾಗಿ ಹೆಣೆದಿರುವ ಸ್ಪೋರ್ಟ್ಸ್ ಡ್ರಾಮಾ ಎಂದಿದ್ದಾರೆ. ಹುಡುಗರು ಹಾಗೂ ಶರಣ್ ಅತ್ಯುತ್ತಮವಾಗಿ ನಟಿಸಿದ್ದು, ಜಡೇಶ್ ಕುಮಾರ್ ಹಂಪಿ ನಿರ್ದೇಶನ ಹಾಗೂ ಅಜನೀಶ್ ಬಿ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಎಂದಿದ್ದಾರೆ ಹಾಗೂ ಗುರು ಶಿಷ್ಯರು ಚಿತ್ರ ಹಿಟ್ ಆಗಲು ಮತ್ತು ಸಾಕಷ್ಟು ಅವಾರ್ಡ್ ಗೆಲ್ಲಲು ಅರ್ಹವಾದ ಚಿತ್ರ ಎಂದು ಬರೆದುಕೊಂಡಿದ್ದಾರೆ.Source link

%d bloggers like this: