ಬ್ರಹ್ಮಾಸ್ತ್ರ ಮುಂದೆ ಬಿಡುಗಡೆಯಾಗಿ ಗೆದ್ದ ತೆಲುಗು ಸಿನಿಮಾ; ನೆಟ್ಟಿಗರ ಬಹುಪರಾಕ್

Spread the love


Reviews

oi-Srinivasa A

|

ಇಂದು ( ಸೆಪ್ಟೆಂಬರ್ 9 ) ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ತೆರೆ ಕಂಡಿದ್ದು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಒಂದೆಡೆ ಬಾಯ್‌ಕಾಟ್ ಟ್ರೆಂಡ್ ಇದ್ದರೂ ಸಹ ಮೊದಲ ದಿನ ಹೆಚ್ಚು ಪ್ರದರ್ಶನಗಳನ್ನು ಕಂಡ ಬ್ರಹ್ಮಾಸ್ತ್ರ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಇನ್ನು ಬಿಗ್ ಬಜೆಟ್ ಬ್ರಹ್ಮಾಸ್ತ್ರ ಎದುರು ತೆಲುಗಿನ ಒಕೆ ಒಕ ಜೀವಿತಂ ಎಂಬ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದ್ಲಲಿ ಸದ್ದು ಮಾಡಲಾರಂಭಿಸಿದೆ.

ಹೌದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡಿದ್ದ ಶರ್ವಾನಂದ್ ಇದೀಗ ಒಕೆ ಒಕ ಜೀವಿತಂ ಮೂಲಕ ಕಮ್‌ ಬ್ಯಾಕ್ ಮಾಡುವ ಎಲ್ಲಾ ಲಕ್ಷಣಗಳಿವೆ. ಶರ್ವಾನಂದ್ ನಾಯಕನಾಗಿರುವ ಈ ಚಿತ್ರದಲ್ಲಿ ರಿತು ವರ್ಮಾ ನಾಯಕಿಯಾಗಿದ್ದು, ಅಕ್ಕಿನೇನಿ ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಕೊನೆಯದಾಗಿ ಚಿತ್ರದ ( ಲೈಫ್ ಈಸ್ ಬ್ಯೂಟಿಫುಲ್ ) ಪಾತ್ರವೊಂದನ್ನು ನಿರ್ವಹಿಸಿದ್ದ ಅಮಲಾ ಅಕ್ಕಿನೇನಿ 2014ರಲ್ಲಿ ಮನಂ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಇನ್ನು ಈ ಚಿತ್ರದಲ್ಲಿ ವೆನ್ನೆಲಾ ಕಿಶೋರ್ ಮತ್ತು ಪ್ರಿಯದರ್ಶಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಶ್ರೀ ಕಾರ್ತಿಕ್ ನಿರ್ದೇಶನವಿದ್ದು, ಈ ನಗರಾನಿಕಿ ಏಮೈಂದಿ ನಿರ್ದೇಶಿಸಿದ್ದ ತರುಣ್ ಭಾಸ್ಕರ್ ಸಂಭಾಷಣೆ ಬರೆದಿದ್ದಾರೆ.

ಇನ್ನು ಬ್ರಹ್ಮಾಸ್ತ್ರ ಮುಂದೆ ಬಿಡುಗಡೆಯಾದ ಈ ಒಕೆ ಒಕ ಜೀವಿತಮ್ ಸಿನಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿ ಬಂದ ವೀಕ್ಷಕರು ಟ್ವಿಟರ್ ವೇದಿಕೆಯಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಳ್ಳುತ್ತಿದ್ದು, ಅವುಗಳ ಪಟ್ಟಿ ಈ ಕೆಳಕಂಡಂತಿದೆ.

review

ಒಕೆ ಒಕ ಜೀವಿತಂ ವೀಕ್ಷಿಸಿದ ದರ್ಶನ್ ಅಭಿಮಾನಿಯೋರ್ವ ಟ್ವೀಟ್ ಮಾಡಿದ್ದು ಚಿತ್ರದ ಮೊದಲಾರ್ಧದ ವಿಮರ್ಶೆ ಹಂಚಿಕೊಂಡಿದ್ದಾರೆ. ಚಿತ್ರ ಅತ್ಯದ್ಭುತವಾಗಿದ್ದು, ಎಮೋಷನ್ ಉಳ್ಳ ಸ್ಕೈ – ಫೈ ಥ್ರಿಲ್ಲರ್ ಎಂದಿದ್ದಾರೆ.

ಮತ್ತೋರ್ವ ಸಿನಿ ಪ್ರೇಕ್ಷಕ ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದು, ಇದೊಂದು ಬ್ರೈನಿ ಸ್ಕೈ ಫೈ ಮೂವಿ ಅಲ್ಲದಿದ್ದರೂ ಎಮೋಷನಲ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಹಾಗೂ ಈ ರೀತಿಯ ಪ್ರಯತ್ನ ಯಶಸ್ವಿಯಾಗಿದ್ದು, ಮೂರ್ನಾಲ್ಕು ವೇಳೆ ಕಣ್ಣಲ್ಲಿ ನೀರು ಬಂತು, ಹಾಲಿವುಡ್ ಸಿನಿಮಾಗಳನ್ನು ತೆಗೆದುಕೊಂಡು ಈ ರೀತಿಯಾಗಿ ಸ್ವದೇಶಿ ಚಿತ್ರಗಳನ್ನು ನಿರ್ಮಿಸಬೇಕು ಎಂದು ಹೊಗಳಿದ್ದಾರೆ.

ತುಂಬಾ ದಿನಗಳ ನಂತರ ಒಂದೊಳ್ಳೆ ನೋಡುವ ಅವಕಾಶ ಮಾಡಿಕೊಟ್ಟ ನಿರ್ದೇಶಕ ಶ್ರೀ ಕಾರ್ತಿಕ್ ಅವರಿಗೆ ತುಂಬಾ ಧನ್ಯವಾದಗಳು, ನಿಮ್ಮ ಕನಸನ್ನು ನಮಗೆ ಅರ್ಪಸಿದ್ದಕ್ಕೆ ತುಂಬಾ ಕೃತಜ್ಞತೆ ಎಂದು ಪೂಜಿತ್ ಎಂಬ ಸಿನಿ ರಸಿಕ ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಸಿನಿ ಪ್ರೇಮಿ ಒಕೆ ಒಕ ಜೀವಿತಂ ಹಾಗೂ ಬ್ರಹ್ಮಾಸ್ತ್ರ ಚಿತ್ರಗಳ ಫಲಿತಾಂಶವನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದು, ಒಕೆ ಒಕ ಜೀವಿತಂಗೆ ಒಳ್ಳೆಯ ವಿಮರ್ಶೆ ಬರುತ್ತಿದ್ದು, ಆದರೆ ಒಳ್ಳೆಯ ಓಪನಿಂಗ್ ಸಿಗಲಿಲ್ಲ ಮತ್ತು ಬ್ರಹ್ಮಾಸ್ತ್ರ ಚಿತ್ರಕ್ಕೆ ಸಾಮಾನ್ಯ ವಿಮರ್ಶೆ ಪಡೆದುಕೊಂಡು ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ.

English summary

Sharwanand and Ritu Varma starrer Oke Oka Jeevitham twitter reviewSource link